ದೀಪಗಳವು ನಿಸ್ತೇಜವೆನಿಸಿದವು; ದಿಲೀಪನ ಮಗನಿಂದ!

10 Mar. 2019

ಸೂತಿಕಾಗೃಹದ ಶಯ್ಯೆಯ ಸುತ್ತ ಪಸರಿಸಿದ್ದ ಉತ್ತಮ ಜನ್ಮನವನ ತೇಜಸ್ಸಿನಿಂದಾಗಿ, ಕಾಂತಿ ಕಳೆದುಕೊಂಡ ಅರ್ಧರಾತ್ರಿಯ ದೀಪಗಳು, ಚಿತ್ರ ಬಿಡಿಸಿದಂತೆ ಆದವು.

 

ಭೂಪತಿಗೆ ಅಮೃತಕ್ಕೆ ಸಮಾನವಾದ ಅಕ್ಷರವಾದ ಕುಮಾರನ ಜನ್ಮವನ್ನು ತಿಳಿಸಿದ ಅಂತಃಪುರದವರಿಗೆ ಕೊಡಬಾರದ್ದಾಗಿ ಇದ್ದದ್ದು ಮೂರೇ – ಚಂದ್ರಕಾಂತಿಯ ಛತ್ರ ಮತ್ತು ಎರಡು ಚಾಮರಗಳು.

 

ನಿರ್ವಾತ ಪ್ರದೇಶದಲ್ಲಿನ ಪದ್ಮದಂತೆ ನಿಶ್ಚಲವಾದ ಕಣ್ಣಿನಿಂದ, ಸೆಳೆಯುವ ಮಗನ ಮುಖವನ್ನು ಕುಡಿಯುತ್ತಿದ್ದ ರಾಜನ ಉತ್ಕಟವಾದ ಹರ್ಷವು ದೇಹದಲ್ಲಿ ಉಳಿದುಕೊಳ್ಳದಂತೆ ಆಯಿತು. ಚಂದ್ರನ ದರ್ಶನದಿಂದ ಮಹಾಸಮುದ್ರದ ದೊಡ್ಡ ಪ್ರವಾಹದಂತೆ.

 

ತಪೋವನದಿಂದ ಬಂದ ತಪಸ್ವಿ ಪುರೋಹಿತರು ಹುಟ್ಟಿದಾಗ ಮಾಡಬೇಕಾದ ಸಂಸ್ಕಾರಗಳೆಲ್ಲವನ್ನು ಮಾಡಿದಾಗ ಆ ಮಗು ಗಣಿಯಿಂದ ಉದ್ಭವಿಸಿದ ಮಣಿಯಂತೆ ಮತ್ತಷ್ಟು ಶೋಭಾಯಮಾನವಾಯಿತು.

 

ಕರ್ಣಮಧುರವಾದ ಮಂಗಲವಾದ್ಯಗಳ ಧ್ವನಿಗಳು, ವೇಶ್ಯೆಯರ ಸಂತಸದ ನೃತ್ಯಗಳು, ಮಾಗಧ ರಾಜಕುಮಾರಿಯ ಪತಿಯ ಅರಮನೆಯಲ್ಲಿ ಮಾತ್ರವಲ್ಲ, ದೇವತೆಗಳ ಮಾರ್ಗವಾದ ಗಗನದಲ್ಲೂ ವಿಜೃಂಭಿಸಿದವು.

 

Quick Link
Address

Shree Ramashrama

 #2A, J.P. Road,
Girinagar 1st Phase, Bangalore – 560085,
Karnataka, India

080 26724979