ಪ್ರಗತಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

12 Mar. 2019

ಮೂರೂರು: ಇಲ್ಲಿಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 11/03/19 ರ ಸೋಮವಾರದಂದು
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕವಾಗಿ ನಡೆಯಿತು. ಗುರುವಂದನೆಯೊಂದಿಗೆ ಆರಂಭಗೊಂಡ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಶಿಕ್ಷಣ ಸಮಿತಿಯ ಸದಸ್ಯರಾದ ಶ್ರೀ ಟಿ ಆರ್ ಜೋಶಿಯವರು ವಹಿಸಿದ್ದರು. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನಿಸಿಕೆಯೊಂದಿಗೆ ನೆನಪಿನ ಕಾಣಿಕೆಯನ್ನು ವಿದ್ಯಾರ್ಥಿಗಳು ಶಾಲೆಗೆ ಹಸ್ತಾಂತರಿಸಿದರು. ಮುಖ್ಯ ಗುರುಗಳಾದ ಶ್ರೀ ಎಮ್.ಜಿ. ಭಟ್ಟರು ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

ಶ್ರೀಮತಿ ಜಯಶ್ರೀ ಭಟ್ಟರು ಸ್ವಾಗತಿಸಿದರೆ ವಂದನಾರ್ಪಣೆಯನ್ನು ಶ್ರೀ ಜಿ.ಆರ್.ನಾಯ್ಕರು ಮಾಡಿದರು. ಶ್ರೀ ಲೋಕೇಶ ಹೆಗಡೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Quick Link
Address

Shree Ramashrama

 #2A, J.P. Road,
Girinagar 1st Phase, Bangalore – 560085,
Karnataka, India

080 26724979